ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ಸದಸ್ಯತ್ವ ನೊಂದಣಿ ಸಭೆಯು ದಿನಾಂಕ: 11-11-2025 ರಂದು ಹುಬ್ಬಳ್ಳಿಯ ವಿದ್ಯಾನಗರ (ಲೋಕಪ್ಪನ ಹಕ್ಕಲ)ದ ಸುಧರ್ಮ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ರಾಜ್ಯ ಉಪಾಧ್ಯಕ್ಷರು ಮತ್ತು ಧಾರವಾಡ ಜಿಲ್ಲಾ ಚುನಾಯಿತ ಪ್ರತಿನಿಧಿಗಳಾದ ಶ್ರೀ ಲಕ್ಷ್ಮಣ ಚಿದಂಬರ ಕುಲಕರ್ಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನಂತರ ಪ್ರಾಸ್ಥಾವಿಕವಾಗಿ ಮಾತನಾಡಿದ ಶ್ರೀ ಲಕ್ಷ್ಮಣ ಚಿದಂಬರ ಕುಲಕರ್ಣಿಯವರು ಮಹಾಸಭೆಯ 2025-2030ರ ಕಾಲಾವಧಿಗೆ ನನ್ನನ್ನು ಜಿಲ್ಲಾ ಪ್ರತಿನಿಧಿಯನ್ನಾಗಿ ಮತ್ತು ರಾಜ್ಯಾಧ್ಯಕ್ಷರಾಗಿ ಎಸ್. ರಘುನಾಥ ರವರನ್ನು ಚುನಾಯಿಸಿದ್ದಕ್ಕಾಗಿ ಹೃದಯಪೂರ್ವಕವಾಗಿ ಅಭಿನಂದಿಸಿ ಮಾತನಾಡಿದ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ದೇಯೋದ್ದೇಶಗಳು ಮತ್ತು ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು ಮತ್ತು ಮುಂದಿನ ದೇಯೋದ್ದೇಶಗಳಾದ ಶೈಕ್ಷಣಿಕ ಮತ್ತು ಗುಂಪು ವಿಮೆ ಮತ್ತು ಸಂಘಟನೆ ಬಗ್ಗೆ ವಿಸ್ತಾರವಾಗಿ ವಿವರಿಸಿದರು ನಂತರ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನೀಡುವ ಧಿಮಂತ ಪ್ರಶಸ್ತಿಗೆ ಭಾಜನರಾದ ಶ್ರೀ ಪಾಂಡುರಂಗ ಗಂಡಮಾಲೆ, ಶ್ರೀ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಶ್ರೀ ದತ್ತಮೂರ್ತಿ ಕುಲಕರ್ಣಿ, ಶ್ರೀ ಜಿ.ಆರ್. ಭಟ್, ಶ್ರೀ ಸಂದೀಪ ಕುಲಕರ್ಣಿ, ಶ್ರೀ ಕಿರಣ ಗಡ ರವರುಗಳನ್ನು ಸತ್ಕರಿಸಲಾಯಿತು. ನಂತರ ಸಮಸ್ತ ವಿಪ್ರ ಬಂಧುಗಳು ಮಹಾ ಸಭೆಯ ಸದಸ್ಯರಾಗಲು ಅತೀ ಉತ್ಸಾಹಿತರಾದರು. ಸಭೆಯಲ್ಲಿ ಶ್ರೀ ಸಂಜೀವ ಜೋಶಿ, ಶ್ರೀ ಸುಧಿಂದ್ರ ದೇಶಪಾಂಡೆ, ವಿಶ್ವ ಮಧ್ವ ಮಹಾ ಪರಿಷತ್ ನ ಶ್ರೀ ಶ್ರೀಧರ ಕುಲಕರ್ಣಿ ಶ್ರೀಮತಿ ಉಷಾ ಮಳಗಿ, ಶ್ರೀಮತಿ ಆಶಾ ಪಾಟೀಲ, ಶ್ರೀಮತಿ ವಿದ್ಯಾ ಜೋಶಿ, ಶ್ರೀಮತಿ ವೇದಾ ಜೋಶಿ, ಶ್ರೀಮತಿ ಸಂಧ್ಯಾ ದೀಕ್ಷಿತ, ಶ್ರೀಮತಿ ರಶ್ಮಿ ಅರಾವಕರ, ಶ್ರೀ ಕುಶಾ ವಾಳ್ವೆಕರ, ಶ್ರೀ ಹೆಚ್. ಮುರಳಿಧರ, ಡಾ: ಸಂದೀಪ ಬಂಕಾಪೂರ ಮತ್ತು ಶ್ರೀ ಸುಧಿಂದ್ರ ಕೊಪ್ಪರ ಉಪಸ್ಥಿತರಿದ್ದರು, ಶ್ರೀಮತಿ ಭಾಗ್ಯಶ್ರಿ ಹುದ್ದಾರ ಕಾರ್ಯಕ್ರಮ ನೀರೂಪಿಸಿದರು, ಶ್ರೀ ಪವನ ದೇಸಾಯಿ ಸ್ವಾಗತಿಸಿದರು ಮತ್ತು ಶ್ರೀ ಸತೀಶ ಹುದ್ದಾರ ವಂದಿಸಿದರು.








