ಶ್ರೀ ಲಕ್ಷ್ಮಣ ಕುಲಕರ್ಣಿ – ಇವರ ಗುರಿ ಏನು? ಇವರು ಇದುವರೆಗೂ ಮಾಡಿದ ಸಮಾಜ ಸೇವೆ ಏನು?

Picture of Laxman Kulkarni

Laxman Kulkarni

Media Report

ಆತ್ಮೀಯ ಗೌರವಾನ್ವಿತ ವಕೀಲ ಬಂಧುಗಳಲ್ಲಿ ಶ್ರೀ ಲಕ್ಷ್ಮಣ ಕುಲಕರ್ಣಿ ಇವರ ಸವಿನಯ ಪ್ರಾರ್ಥನೆ. ಪ್ರತಿಷ್ಠಿತ ಹುಬ್ಬಳ್ಳಿ ವಕೀಲರ ಸಂಘದ ೨೦೨೫-೨೦೨೭ ರ ಅವಧಿಯ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀ ಲಕ್ಷ್ಮಣ ಸಿ. ಕುಲಕರ್ಣಿ ಸ್ಪರ್ಧಿಸಿದ್ದು, ಸಂಘಟನೆ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಇವರು, ವೃತ್ತಿ ಬಾಂಧವರ ಒಳಿತಿಗಾಗಿ ಎಲ್ಲರೂ ಬೆಂಬಲಿಸುತ್ತೀರೆಂಬ ಭರವಸೆ ಹೊಂದಿದ್ದಾರೆ.

ಇವರು ಯಾರು?
ಇವರು ಯಾರು, ಇವರು ಎಲ್ಲಿಯವರು, ಇವರ ಗುರಿ ಏನು? ಇವರ ಉದ್ದೇಶವೇನು? ಇವರು ಇದುವರೆಗೂ ಮಾಡಿದ ಸಮಾಜ ಸೇವೆ ಏನು? ಇವರ ಬದ್ಧತೆ ಏನು? ಎಂಬ ಒಂದಿಷ್ಟು ಅಂಶಗಳನ್ನು ನಿಮ್ಮೆದುರು ಹೇಳಿಕೊಳ್ಳದೇ, ನಿಮಗೆ ಇವರ ಬಗ್ಗೆ ಭರವಸೆ ಹುಟ್ಟಲು ಹೇಗೆ ಸಾಧ್ಯ? ಸಮುದಾಯದ ಏಳ್ಗೆಗಾಗಿ ಸದಾ ತುಡಿಯುವ ಜನ್ಮ ಇವರದು ಎಂದು ಮನವರಿಕೆ ಮಾಡದೇ, ಚುನಾವಣೆಯಲ್ಲಿ ಇವರನ್ನು ಗೆಲ್ಲಿಸಿ ಎಂದರೆ ಅದ್ಹೇಗೆ ಸಾಧ್ಯ? ನಿಮಗೂ ಇವರು ಯಾರೆಂಬುದು ಗೊತ್ತಾಗಬೇಕು, ಇವರ ಮೇಲಿಷ್ಟು ಭರವಸೆಯ ಆಶಾಕಿರಣ ಮೂಡಬೇಕು, ಇವರ ಕಾರ್ಯ ಸಾಧನೆಗಳ ಪಟ್ಟಿಯನ್ನು ನೀವು ನೋಡಿ ಮೆಚ್ಚಬೇಕು, ನಂತರ ನಿಮಗೂ ಇವರನ್ನು ಬೆಂಬಲಿಸಬೇಕು ಎಂದು ಅನಿಸಬಹುದು.


ಪರಿಚಯ;
ಇವರು ನಿಮ್ಮವರು, ವೃತ್ತಿ ಸೇರಿದಂತೆ ಸಮಾಜದಲ್ಲಿ ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಬಂದವರು. ಸಾಮಾಜಿಕ ಜೀವನ, ಪರರ ಹಿತಕ್ಕಾಗಿಯೇ ಇವರ ಬದುಕಿನ ಪ್ರತಿಕ್ಷಣ ಮುಡಿಪಿಟ್ಟವರು ಎಂದು ಮಾತ್ರ ಹೇಳಬಹುದು. ಆದರೂ, ಸಂದರ್ಭೋಚಿತವೆನಿಸಿ ಇವರ ಕೌಟುಂಬಿಕ ಹಿನ್ನೆಲೆಯ ಕಿರು ಪರಿಚಯ ಮಾಡುವುದಾದರೆ. ಇವರು ಲಕ್ಷ್ಮಣ ಚಿದಂಬರ ಕುಲಕರ್ಣಿ. ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹುಲಗೂರ ಗ್ರಾಮದವರು. ಜನಿಸಿದ್ದು ೦೮.೦೫.೧೯೭೯ ರಂದು ದಿ. ಚಿದಂಬರರಾವ್ ಶಿವರಾಮ್‌ರಾವ್ ಕುಲಕರ್ಣಿ ಮತ್ತು ರತ್ನಾಬಾಯಿ ಚಿದಂಬರ ಕುಲಕರ್ಣಿ ಇವರ ಮೂರನೇ ಮಗ. ಇವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಹುಟ್ಟೂರಾದ ಶಿಗ್ಗಾಂವ ತಾಲೂಕು ಹುಲಗೂರಲ್ಲಿ ಮುಗಿಸಿದ್ದು, ಮುಂದಿನ ವಿದ್ಯಾಭ್ಯಾಸವೆಲ್ಲ ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಕನಕದಾಸ ಶಿಕ್ಷಣ ಸಮಿತಿಯ ಕನಕದಾಸ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಲಾ ಪದವಿ ಪಡೆದ ಹಿರಿಮೆ.


ಸಂಘಟನೆ-ಹೋರಾಟದಲ್ಲಿ ಸಕ್ರಿಯ;
ವಿದ್ಯಾರ್ಥಿ ದಿಶೆಯಲ್ಲಿಯೇ ಅನೇಕ ವಿದ್ಯಾರ್ಥಿ ಚಳವಳಿಯಲ್ಲಿ ಧುಮುಕಿ ಹೋರಾಟದ ನೇತೃತ್ವ ವಹಿಸಿದ ಅನುಭವ. ಶುಲ್ಕ ಹೆಚ್ಚಳದ ವಿರುದ್ಧ, ಗ್ರಾಮೀಣ ಕೃಪಾಂಕ, ಬಸ್ ಪಾಸ್ ಸೇರಿದಂತೆ ಸಾಕಷ್ಟು ಹೋರಾಟಗಳಲ್ಲಿ ಜಯ ಪಡೆದದ್ದೂ ಇದೆ. ಹುಬ್ಬಳ್ಳಿಯ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ. ಕಾನೂನು ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾನೂನು ವಿದ್ಯಾರ್ಥಿಗಳ ಸಂಚಲನಾ ಸಮಿತಿಯ ಸಂಚಾಲಕರಾಗಿ ಮೂರು ವರ್ಷಗಳವರೆಗೆ ಕಾರ್ಯ ನಿರ್ವಹಿಸಿದ್ದಾರೆೆ . ಕಾನೂನು ವಿದ್ಯಾರ್ಥಿಗಳ ಸಂಚಲನಾ ಸಮೀತಿಯ ಸಂಚಾಲಕನಾದಾಗ ಕರ್ನಾಟಕ ವಿಶ್ವ ವಿದ್ಯಾಲಯದ ವ್ಯಾಪ್ತಿಯ ಏಳೂ ಜಿಲ್ಲೆಗಳ ಕಾನೂನು ವಿದ್ಯಾರ್ಥಿಗಳನ್ನು ಸಂಘಟಿಸಿ, ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿ ಅನೇಕ ಹೋರಾಟಗಳನ್ನು ರಚಿಸಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಕಲಾ ಪದವಿ ವ್ಯಾಸಂಗ ಮಾಡುವ ಸಮಯದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಸೆನೆಟ್ ವಿದ್ಯಾರ್ಥಿ ವಿಭಾಗದ ೧೯೯೭- ೯೮ರ ಚುನಾವಣೆಯಲ್ಲಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡರೂ ಏಳೂ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವಿದ್ಯಾರ್ಥಿಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿದ ಅನುಭವ ಮತ್ತು ತೃಪ್ತಿ ಖಂಡಿತಾ ಇದೆ.
೨೦೦೪ ರಲ್ಲಿ ಕಾನೂನು ವೃತ್ತಿಯನ್ನು ಗೌರವಾನ್ವಿತ ಹುಬ್ಬಳ್ಳಿಯ ನ್ಯಾಯಾಲಯದಲ್ಲಿ ಪ್ರಾರಂಭಿಸಿ, ನಂತರ ಧಾರವಾಡದಲ್ಲಿ ಗೌರವಾನ್ವಿತ ಉಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾದ ನಂತರ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿಯೂ ಸಹ ಇವರು ವಕೀಲ ವೃತ್ತಿಯನ್ನು ಮಾಡುತ್ತಿದ್ದಾರೆ. ಇವರದೇ ಆದ ವಾಗ್ದೇವಿ ಲಾ ಚೇಂಬರ್ ಎಂಬ ಕಚೇರಿ ಇದೆ. ಆರು ಜನ ಕಿರಿಯ ನ್ಯಾಯವಾದಿಗಳು, ಮೂರು ಜನ ಟೈಪಿಸ್ಟ್ ಮತ್ತು ಎರಡು ಜನ ಕಾರ್ಕೂನರು ಇವರ ಕಚೇರಿಯಲ್ಲಿದ್ದು, ಇವರ ವೃತ್ತಿ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.


ರಾಜ್ಯದ ಪ್ರತಿಷ್ಠಿತ ದೇವಸ್ಥಾನ, ಮಠ, ಟ್ರಸ್ಟ್ಗಳಿಗೆ ಅಷ್ಟೇ ಅಲ್ಲದೇ ಬರೋಬ್ಬರಿ ೨೮ ಬ್ಯಾಂಕುಗಳಿಗೆ ಕಾನೂನು ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ವೃತ್ತಿಯ ಕಿರು ಸಾಧನೆಗೆ ನಿದರ್ಶನ. ಈ ಎಲ್ಲ ಹಿನ್ನೆಲೆಯಲ್ಲಿ ವಕೀಲ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ವಕೀಲ ವೃತ್ತಿಗೆ ಪೂರಕ ರಚನಾತ್ಮಕ ಕೆಲಸ ಮಾಡಲು ಇವರಿಗೆ ಒಂದು ಅವಕಾಶ ದೊರಕಿಸಿಕೊಡಲು ಸಹಕರಿಸಬೇಕೆಂದು ಎಲ್ಲ ವಕೀಲ ಬಾಂಧವರಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತಾರೆ. ಕೇವಲ ಈ ಹಿಂದಿನ ಇವರ ಹೋರಾಟದ ಬದುಕು, ವೃತ್ತಿ ಪಯಣದ ಕಿರು ನೋಟವನ್ನೇನೋ ನಿಮ್ಮ ಮುಂದೆ ತೆರೆದಿಟ್ಟೆ. ಆದರೆ, ನಿಮ್ಮೆಲ್ಲರ ಆಶೀರ್ವಾದದಿಂದ ವಕೀಲರ ಸಂಘಕ್ಕೆ ಆಯ್ಕೆಯಾದ ನಂತರ ಇವರು ಮಾಡಬೇಕಾದ, ನಿರ್ವಹಿಸಬೇಕಾದ ಜವಾಬ್ದಾರಿಯ ಅರಿವೂ ಇವರಿಗಿದೆ. ಈ ಹಿನ್ನೆಲೆಯಲ್ಲಿ ವೃತ್ತಿ ಬಾಂಧವರು ಮೆಚ್ಚುವಂತೆ, ಕರಿ ಕೋಟಿನ ವೃತ್ತಿಗೆ ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡುವ ಬದ್ಧತೆ ಮೆರೆಯುವ ಮಾತು ಕೊಡುತ್ತಿದ್ದಾರೆ. ವಕೀಲರ ವೃತ್ತಿ ಯಶಸ್ಸು, ಅವರ ಘನತೆ ಹಾಗೂ ಆಧುನಿಕ ಬದುಕಿನಲ್ಲಿ ವೃತ್ತಿಗೆ ಪೂರಕವಾದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಬಲವಾದ ಕನಸುಗಳಿವೆ. ಇವರ ಕನಸುಗಳ ರೆಕ್ಕೆಗೆ ನೀವು ಬಲ ತುಂಬುವುದು ನಿಮ್ಮ ಆಶಿರ್ವಾದದ ಮೂಲಕ ಬಾಕಿ ಇದೆ.

ನಿಮ್ಮ ಬೆಂಬಲಕ್ಕಾಗಿ ಕಾದಿರುವ ಇವರ ಕನಸುಗಳು
೧. ಎಲ್ಲ ನ್ಯಾಯವಾದಿಗಳಿಗೆ ಗುಂಪು ಆರೋಗ್ಯ ವಿಮೆ. (Group Health Insurance).
೨. ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣದಲ್ಲಿ ಎಟಿಎಮ್ ವ್ಯವಸ್ಥೆ.
೩. ನ್ಯಾಯವಾದಿಗಳ ಮಕ್ಕಳ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಕುರಿತು ನಿಧಿ ಸಂಗ್ರಹಣೆ.
೪. ನ್ಯಾಯವಾದಿಗಳ ಕುಂದು ಕೊರತೆಗಳ ಪರಿಹಾರಕ್ಕಾಗಿ ಸಲಹಾ ಪೆಟ್ಟಿಗೆ.
೫. ಸಹಾಯವಾಣಿ ತೆರೆಯುವ ಮೂಲಕ ವಕೀಲರಿಗೆ ೨೪x೭ ಸೇವೆ ಒದಗಿಸುವುದು.
೬. ಮಹಿಳಾ ಹಾಗೂ ಪುರುಷ ವಕೀಲರಿಗೆ ಹವಾ ನಿಯಂತ್ರಿತ ವಿಶ್ರಾಂತಿ ಕೊಠಡಿ.
೭. ಕಿರಿಯ ನ್ಯಾಯವಾದಿಗಳ ಜ್ಞಾನಾರ್ಜನೆಗಾಗಿ ಕಾನೂನು ಕಾರ್ಯಗಾರ ಆಯೋಜನೆ
೮. ಕಿರಿಯ ನ್ಯಾಯವಾದಿಗಳಿಗೆ ಸರಕಾರದಿಂದ ಕೊಡುವ ಸಹಾಯ ಧನ ಅತ್ಯಂತ ತ್ವರಿತವಾಗಿ ಲಭಿಸಲು ಪ್ರಯತ್ನ.
೯. ನ್ಯಾಯವಾದಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು.
೧೦. ರಾಜ್ಯದಲ್ಲಿ ನ್ಯಾಯವಾದಿಗಳಿಗೆ ಟೋಲ್ ರಹಿತ ಸಂಚಾರಕ್ಕೆ ಪ್ರಯತ್ನಿಸುವುದು.
೧೧. ನ್ಯಾಯವಾದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಸತಿ ನಿವೇಶನಗಳ ನಿರ್ಮಾಣಕ್ಕೆ ಕ್ರಮ.
೧೨. ಹುಬ್ಬಳ್ಳಿ ನ್ಯಾಯಾಲಯದ ಆವರಣದಲ್ಲಿ ಪರಿಣಾಮಕಾರಿ Internet Network ಒದಗಿಸಲು ಪ್ರಯತ್ನ.
೧೩. ಹುಬ್ಬಳ್ಳಿ ನ್ಯಾಯಾಲಯದ ಆವರಣದಲ್ಲಿ ಉತ್ತಮ ಗುಣಮಟ್ಟದ ಉಪಹಾರ ಮತ್ತು ಊಟದ ವ್ಯವಸ್ಥೆಗಾಗಿ ಸ್ವಚ್ಛ ಮತ್ತು ಶುಚಿತ್ವದ ಉಪಹಾರ ಮಂದಿರ ತೆರೆಯಲು ಪ್ರಯತ್ನ.
೧೪. ನ್ಯಾಯವಾದಿಗಳ ಅವಶ್ಯಕತೆಗೆ ತಕ್ಕಂತೆ ಲಿಫ್ಟ್ಗ ಳನ್ನು ಹೆಚ್ಚಿಸುವುದು.
೧೫. ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡು ಪರಿಷತ್‌ನ ಎಲ್ಲ ಅನುಕೂಲತೆಗಳನ್ನು ಒದಗಿಸಿಕೊಳ್ಳುವುದು.
೧೬. ಕರ್ನಾಟಕ ರಾಜ್ಯ ವಕೀಲರ ಪರಿಷತ್, ನ್ಯಾಯವಾದಿಗಳಿಗೆ ಕೊಡಲ್ಪಡುವ ಸ್ಟಿಕರ್‌ಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡುವುದು.
೧೭. ನ್ಯಾಯವಾದಿಗಳಿಗೆ ಯಾವುದೇ ಸಮಸ್ಯೆ, ಆತಂಕ ಉಂಟಾದಾಗ ಅವರಿಗೆ ಬೆಂಬಲವಾಗಿ ನಿಲ್ಲುವುದು.
೧೮. ವೃತ್ತಿಯೊಂದಿಗೆ ವಕೀಲರಲ್ಲಿ ಅಡಗಿರುವ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಅನೇಕ ಸುಪ್ತ ಪ್ರತಿಭಾ ಅನಾವರಣಕ್ಕೆ ಪೂರಕ ವೇದಿಕೆ ಸೃಷ್ಟಿಸುವುದು.
೧೯. ಪುರುಷ ಮತ್ತು ಮಹಿಳಾ ನ್ಯಾಯವಾದಿಗಳ ಆರೋಗ್ಯದ ಹಿತ ದೃಷ್ಠಿಯಿಂದ ವ್ಯಾಯಾಮ ಶಾಲೆ (ಜಿಮ್) ವ್ಯವಸ್ಥೆ ಮಾಡುವುದು.
೨೦. ವಕೀಲರುಗಳ ಆರೋಗ್ಯದ ಹಿತದೃಷ್ಠಿಯಿಂದ ಸುಸಜ್ಜಿತವಾದ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವ್ಯವಸ್ಥೆ ಮಾಡುವುದು.
೨೧. ಎಲ್ಲ ನ್ಯಾಯವಾದಿಗಳಿಗೆ ಲಾ ಛೆಂಬರಗಳನ್ನು ಕೊಡಿಸುವ ವ್ಯವಸ್ಥೆ ಮಾಡುವುದು.
೨೨. ಲಾ ಛೆಂಬರುಗಳಲ್ಲಿಯೇ ನ್ಯಾಯಾಲಯದ ಪ್ರಕರಣಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲು ಸಂಪೂರ್ಣವಾದ ತಾಂತ್ರಕ ಮತ್ತು ವಿದ್ಯನ್ಮಾನ ವ್ಯವಸ್ಥೆ ಮಾಡುವುದು.

ಇವಿಷ್ಟೇ ಅಲ್ಲದೇ, ಕಾಲಕಾಲಕ್ಕೆ ಸಭೆ ನಡೆಸುವ ಮೂಲಕ ವಕೀಲರ ಅನುಕೂಲ, ಅನಾನುಕೂಲಗಳನ್ನು ತಿಳಿದು, ಎಲ್ಲರ ಸದಭಿಪ್ರಾಯ ಪಡೆದು ಅವುಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದಲ್ಲದೇ, ಎಲ್ಲಕ್ಕಿಂತ ಮುಖ್ಯವಾಗಿ ವೃತ್ತಿ ಬಾಂಧವರೆಲ್ಲರ ಪ್ರೀತಿ, ವಿಶ್ವಾಸದೊಂದಿಗೆ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸುವ ಹಂಬಲ ಇವರದು.

ಆದುದರಿಂದ ಸಂಘದ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ, ಮುಂಬರುವ 2025-27ನೇ ಸಾಲಿನ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಶ್ರೀ ಲಕ್ಷ್ಮಣ ಸಿ. ಕುಲಕರ್ಣಿ ಅವರು ಸಂಘದ ಉನ್ನತಿ ಮತ್ತು ವಕೀಲ ಮಿತ್ರರ ಹಿತಾಸಕ್ತಿಗಳಿಗಾಗಿ ಶ್ರಮಿಸಲು, ತಾವುಗಳು ತಮ್ಮ ಅಮೂಲ್ಯವಾದ ಮತವನ್ನು ನೀಡಿ, ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ.

Scroll to Top